Ayurvediccommunity.com©
 

ಕಾಲ ದೇಶ ಆಯುರ್ವೇದ ಮತ್ತು ಹಬ್ಬ

ಹೇಮಂತ ಶಿಶಿರ ಋತುಗಳು (1,2) -

(ಅಕ್ಟೋಬರ್ ೨೨ ರಿಂದ ಫೆಬ್ರವರಿ ೨೨) , ಸೌರಮಾಸ:-ವೃಶ್ಚಿಕ, ಧನು, ಮಕರ, ಕುಂಭ. , ಚಾಂದ್ರಮಾನ ಮಾಸ:- ಮಾರ್ಗಶಿರ, ಪುಷ್ಯ, ಮಾಘ, ಪಾಲ್ಗುಣ. ಉಷ್ಣಾಂಶ :- ೧೩-೧೮ಡಿಗ್ರಿ. ಸೆ. ,ಲಕ್ಷಣ -ಹಿಮದಿಂದ ಕೂಡಿದ ಋತು ಹೇಮಂತ.
add rutu ahara
ದೇಹದಲ್ಲಿ ಬದಲಾವಣೆ-ಈ ಋತುವಿನಲ್ಲಿ ಶೀತ ವಾತಾವರಣದಿಂದಾಗಿ ಕೆಮ್ಮು, ನೆಗಡಿ, ಸೀನು, ಜ್ವರ, ತುರಿಕೆ ಇತ್ಯಾದಿ ಬರುವ ಸಾಧ್ಯತೆ ಇರುತ್ತದೆ.
ಋತು ಚರ್ಯೆವಿವರಣೆ - ವಿಹಾರ -ಹೊರಗೆ ಹೋಗುವಾಗ ತಲೆಗೆ ಆಯಾ ಜಾಗ ಉಷ್ಣತೆ ಅನುಸರಿಸಿ ಉಣ್ಣೆ, ಹತ್ತಿಯ ಶಾಲ್ ಸ್ವೆಟರ್ಗಳನ್ನು ಧರಿಸ ಬೇಕು. ಅಲ್ಲದೆ ಕೈ-ಕಾಲು ತೊಳೆಯಲು, ಸ್ನಾನಕ್ಕೆ ಬಿಸಿ ನೀರನ್ನೇ ಉಪಯೋಗಿಸ ಬೇಕು. ನಿತ್ಯ ಚೆನ್ನಾಗಿ ಬೆವರು ಬರುವಷ್ಟು ವ್ಯಾಯಾಮ ಮಾಡ ಬೇಕು. ವ್ಯಾಯಾಮಕ್ಕೆ ಮೊದಲು ಅಲ್ಪ ಪ್ರಮಾಣದ ಬಲವೃದ್ಧಿ ಮಾಡುವ ಎಣ್ಣೆಗಳಿಂದ ಬಲಾತೈಲ, ಕ್ಷೀರಬಲಾ ತೈಲ ಇತ್ಯಾದಿ ಎಣ್ಣೆಯಿಂದ ಅಭ್ಯಂಗ ಮಾಡಬೇಕು. ವ್ಯಾಯಾಮದ ನಂತರ ಔಷಧಿ ದ್ರವ್ಯಗಳ ಚೂರ್ಣದಿಂದ ಉದ್ವರ್ತನ(ಮೈ ಉಜ್ಜುವುದು) ಹಿತಕರ.
           ಕಾಲ ಸ್ವಭಾವದಿಂದಾಗಿ ಹಸಿವೆ ಹೆಚ್ಚಾಗುವ ಕಾರಣ ಪಥ್ಯ - ಹೆಚ್ಚು ಪೌಷ್ಟಿಕವಾದ ಆಹಾರ, ಸಿಹಿ ಆಹಾರ, ಕಬ್ಬಿನ ಹಾಲು, ಗೋಧಿ, ಹೊಸ ಅಕ್ಕಿ ಅನ್ನ, ದ್ವಿದಳಧಾನ್ಯಗಳಿಂದ ತಯಾರಿಸಿದ ಆಹಾರ, ಹಸಿ ಎಣ್ಣೆ, ತುಪ್ಪ ಹೆಚ್ಚು ಹಿತಕರ. ಮಾಂಸಾಹಾರಿಗಳಿಗೆ - ಮಾಂಸರಸ(Soup) ಛರ್ಬಿಯಿಂದ ಕೂಡಿದ ಆಹಾರ ಹಿತಕರ
ನಗರಗಳಲ್ಲಿ- ಪಥ್ಯ - ಈ ಕಾಲಗಳಲ್ಲಿ `ಉತ್ತರ ಭಾರತ'ದ ತಿನಿಸುಗಳ ಸೇವನೆ ಹಿತಕರ (ನಾನ್, ಪರೋಟ ಇತ್ಯಾದಿ ) ಆದರೆ ಅವುಗಳೊಂದಿಗೆ ನಿಂಬೆರಸ ಸೇರಿಸಿದ ಬಿಸಿ ನೀರಿನ ಸೇವನೆ ಆ ಆಹಾರ ಜೀರ್ಣವಾಗಲು ಸಹಕಾರಿ. ಇಲ್ಲಿನ ಆಹಾರ ಪಾಕವಿಧಾನ ಮತ್ತು ವಾತಾವರಣಕ್ಕೆ ಆಹಾರದ ನಂತರ ಐಸ್ಕ್ರೀಮ್ ಅಥವಾ ಬಾಳೆಹಣ್ಣಿನ್ನು ಸೇವಿಸಬಾರದು.
ಹಬ್ಬಗಳು- ಧನುರ್ಮಾಸ, ಸಂಕ್ರಾತಿ, ರಥ ಸಪ್ತಮಿ
ಹಬ್ಬ ಮತ್ತು ಋತು ಚರ್ಯೆ- ಚಳಿ ಪ್ರಾರಂಭವಾದ ಕೂಡಲೇ ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚಿ; ದೇಹದ ಒಳಭಾಗಕ್ಕೆ ರಕ್ತ ಸಂಚಾರ ಹೆಚ್ಚಾಗಿ ಹಸಿವೆ ಜಾಸ್ತಿ ಆಗುತ್ತದೆ. ಹಾಗಾಗಿ ನಿಧಾನವಾಗಿ ಜೀರ್ಣಿಸುವ ಸಿಹಿ ತಿಂಡಿಗಳು ಅಗತ್ಯ. ಅದೇ ರೀತಿ ಧನುರ್ಮಾಸದಲ್ಲಿ ಸೂರ್ಯ ಉದಯ ಅಸ್ತಕ್ಕನುಗುಣವಾಗಿ ಆಹಾರ ಸೇವಿಸುವವರಿಗೆ ಬೇರೆ ಋತುವಿಗಿಂತ ಬೇಗ ಆಹಾರ ಸೇವನೆ ಅಗತ್ಯ. ಕೇವಲ ಬೇಗ ಏಳುವುದು ಮಾತ್ರಾ ಧನುರ್ಮಾಸದ ಆಚರಣೆ ಅಲ್ಲ. ಸಿಹಿ ಮತ್ತು ಖಾರ ಪೊಂಗಲ್ಗಳು ಹಿತಕರ. ಚಳಿ ಜಾಸ್ತಿ ಆದಂತೆ ಚರ್ಮ ಒಣಗಲು, ಒಡೆಯಲು ಪ್ರಾರಂಭವಾದಾಗ ಜಿಡ್ಡಿನಂಶ ಇರುವ ಸಂಕ್ರಾತಿಯ ಆಹಾರವಾದ ಎಳ್ಳು, ಕಡಲೆ, ಬೆಲ್ಲ, ಕಬ್ಬು ಇವುಗಳ ಮಿಶ್ರಣ (ಸಂಪೂರ್ಣವಾಗಿ) ತಿನ್ನುವುದು ಅಗತ್ಯ. ಮುಂದೆ ಚಳಿ ಜಾಸ್ತಿ ಆದಂತೆ ಇದೇ ಆಹಾರವನ್ನೂ, ಎಣ್ಣೆ ಅಭ್ಯಂಗವನ್ನೂ (ಚರ್ಮದ ರಕ್ಷಣೆಗಾಗಿ) ಮಾಡ ಬೇಕು. ಇದನ್ನು ರಥ ಸಪ್ತಮಿವರೆಗೂ ಮುಂದುವರಿಸಬೇಕು.. ವಸಂತದಲ್ಲಿ ಬರುವ ಕಫದ ಬಾದೆಯನ್ನು ತಪ್ಪಿಸಲು ರಥಸಪ್ತಮಿಯಂದು ಎಕ್ಕದ ಎಲೆಯನ್ನು ಭುಜದಮೇಲೆ ಇಟ್ಟುಕೊಂಡು ಸ್ನಾನ ಮಾಡಲು ಸೂಚ್ಯವಾಗಿ ಹೇಳಿದ್ದಾರೆ.

ವಸಂತ ಋತು - (3)

ಮಾರ್ಚ್-ಮೇ, ಸೌರಮಾಸ - ಮೀನ - ಮೇಷ ಮಾಸ, ಚಾಂದ್ರಮಾನಮಾಸ - ಪಾಲ್ಗುಣ,ಚೈತ್ರ, ವೈಶಾಖ, ಉಷ್ಣತೆ - ೨೫ ರಿಂದ ೩೦ ಡಿಗ್ರಿ ಸೆಂ.
ಲಕ್ಷಣ -ಈ ಕಾಲದಲ್ಲಿ ಚಳಿ ಕಡಿಮೆಯಾಗಿ ಬಿಸಿಲು ಹೆಚ್ಚಾಗಲು ಪ್ರಾರಂಭವಾಗುತ್ತದೆ. ನೆನಪಿಡಿ - ಚಳಿಯ ನಂತರ ಮಳೆ ರಹಿತವಾಗಿ ಸ್ವಲ್ಪ ಬಿಸಿಲು ಬಂದರೆ ಉಷ್ಣತೆ 30cವರೆಗೆ ಏರುತ್ತದೆ, ಮರಗಳ ಎಲೆ ಚಿಗುರಲು ಪ್ರಾರಂಭವಾಗುತ್ತದೆ. ಸ್ನಿಗ್ಧ ಶೀತವಾದ ಗಾಳಿ ಬೀಸಲು ಶುರುವಾಗುತ್ತದೆ.
ದೇಹದಲ್ಲಿ ಬದಲಾವಣೆ - ಈ ರೀತಿಯಾದ ವಾತಾವರಣದಿಂದ ಚಳಿಗಾಲದ ಶೀತದಿಂದಾಗಿ ದೇಹದಲ್ಲಿ ಸಂಚಯವಾದ ಕಫವು ವಸಂತದ ಅಲ್ಪವಾದ ಬಿಸಿಲಿನಂದಾಗಿ ಕರಗಿ ನೀರಾಗಿ ಜೀರ್ಣ ಶಕ್ತಿಯನ್ನು ಕಡಿಮೆ ಮಾಡಿ ಕಫ ಸಂಬಂಧವಾದ ತೊಂದರೆ ಉಂಟು ಮಾಡುತ್ತದೆ, ಎಂದರೆ ಅಜೀರ್ಣ, ಉಬ್ಬಸ, ನೆಗಡಿ, ತಲೆನೋವು, ಜ್ವರ, ಗುಳ್ಳೆಗಳ ಸಹಿತವಾದ ವ್ಯಾಧಿಗಳನ್ನು ಉತ್ಪತ್ತಿ ಮಾಡುತ್ತದೆ.
add chart here
ಋತು ಚರ್ಯೆವಿವರಣೆ-ಈ ಕಾಲದ ಖಾಯಿಲೆಗಳನ್ನು ತಡೆಗಟ್ಟಲು ಸಿಹಿ ಕಹಿಗಳ ಮಿಶ್ರಣದ ಬಳಕೆ ಪ್ರಾತಃ ಕಾಲದಲ್ಲೇ ಅಗತ್ಯ. ಅದಕ್ಕಾಗಿ ಯುಗಾದಿಯ ಆಚರಣೆಯನ್ನು ಬೇವು ಬೆಲ್ಲದ ಮೂಲಕ ಮಾಡುತ್ತಾರೆ.
ಪಥ್ಯ - ಈ ಕಾಲದಲ್ಲಿ ಪಡವಲ, ಹೀರೆ, ಹಾಗಲ ಕಾಯಿಗಳ ಸೇವನೆ ಅಗತ್ಯ, ಕುಡಿವ ನೀರಿಗೆ ಕೊನ್ನಾರಿ, ಶುಂಠಿ, ಕರ್ಪೂರ, ಶ್ರೀಗಂಧ, ಕಾಚು ಅಥವಾ ಜೇನನ್ನು ಸೇರಿಸದೆ ಕುಡಿಯ ಬಾರದು (ಒಂದು ಲೀಟರ್  ಕುದಿಯುತ್ತಿರುವ ನೀರಿಗೆ ಒಂದರಿಂದ ಎರಡು ಚಿಟಿಕೆ ಇವುಗಳ ಚೂರ್ಣ ಸೇರಿಸಿ ಇಳಿಸಿ ಮುಚ್ಚಿಡುವುದು. ಬೇಕಾದಾಗ ಹದ ಬಿಸಿ ಅಥವಾ ತಣ್ಣಗೆಯೇ ಕುಡಿಯ ಬಹುದು, ಇದರಿಂದ ಅತಿಸಾರಾದಿ ಜೀರ್ಣಾಂಗದ ವ್ಯಾಧಿಗಳು ಬರುವುದಿಲ್ಲ. ವ್ಯಾಯಾಮ ಅಗತ್ಯ, ವ್ಯಾಯಾಮದ ನಂತರ ಅನುಕೂಲ ಇರುವವರು ಶ್ರೀಗಂಧ, ಲಾವಂಚ, ಅರಸಿನ, ಸೀಗೇಕಾಯಿ ಮುಂತಾದುವುಗಳ ಚೂರ್ಣದಿಂದ ಮೈಯನ್ನು ತಿಕ್ಕಿಕೊಳ್ಳಬೇಕು. ಇದರಿಂದ ಕಫ ರೋಗಗಳು ಹಾಗು ಹೃದಯ ಸಂಬಂಧಿ ರೋಗಗಳು ಬರುವುದಿಲ್ಲ. ಸ್ನಾನಕ್ಕೆ ಬಿಸಿ ನೀರನ್ನು ಬಳಸ ಬೇಕು. ಅವಕಾಶವಿದ್ದಾಗ ಉದ್ಯಾನ ವನಗಳಲ್ಲಿ ವಿಹರಿಸುವುದು ಒಳ್ಳೆಯದು.
ಅಪಥ್ಯ- ದ್ರವ ಪದಾರ್ಥಗಳು, ಪಾನಕಗಳನ್ನು ಸೇವಿಸ ಬಾರದು. ಬದಲು ನೀರನ್ನು ಒಣಗಿಸುವ, ಹಸಿವೆಯನ್ನು ಜಾಸ್ತಿ ಮಾಡುವ ಚಟ್ನಿ ಪುಡಿ, ಉಪ್ಪಿನಕಾಯಿ, ಸುಟ್ಟ ಹಪ್ಪಳ, (ಮಾಂಸಾಹಾರಿಗಳಿಗೆ ಸುಟ್ಟು ತಯಾರಿಸಿದ ಮಾಂಸಾಹಾರ) ಉತ್ತಮ. ನೀರನ್ನು ಹೆಚ್ಚು ಕುಡಿಯ ಬಾರದು. ಉಷಃ ಪಾನವೂ ನಿಷಿದ್ದವೇ! ಮೊಸರು ಮತ್ತು ಅದರಿಂದ ತಯಾರಿಸಿದ ದ್ರವ್ಯಗಳು ಒಳ್ಳೆಯದಲ್ಲ ಬದಲಿಗೆ ಕಡೆದು ಮಜ್ಜಿಗೆ ಮಾಡಿ, ಉಪ್ಪು, ಶುಂಠಿ, ಕೊತ್ತಂಬರಿ ಸೊಪ್ಪುಗಳನ್ನು ಹಾಕಿ ಕುಡಿಯುವುದು ಒಳ್ಳೆಯದು. ಇದು ಕಫವನ್ನು ಕಡಿಮೆ ಮಾಡಿ ಬರಬಹುದಾದ ಖಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಇದೇ ರೀತಿ ಈ ಕಾಲದಲ್ಲಿ ತಂಪುಪೆಟ್ಟಿಗೆಯಲ್ಲಿಟ್ಟ (ರೆಫ್ರಿಜರೇಟೆಡ್) ಆಹಾರ, ಐಸ್  ಹಾಕಿದ ಆಹಾರ, ಏರ್ಕಂಡೀಶನ್, ಫ್ಯಾನ್, ಹಾಗು ಹಗಲು ನಿದ್ದೆ ಇತ್ಯಾದಿ ಸರ್ವಥಾ ನಿಷಿದ್ಧ. ಅದೇ ರೀತಿ ಮದುವೆ ಆದವರು ಬ್ರಹ್ಮ ಚರ್ಯ ಮಾಡ ಬಾರದು. ಇವುಗಳೆಲ್ಲವೂ ಕರಗಿದ ಕಫವನ್ನು ಪುನಃ ಗಟ್ಟಿಮಾಡಿ ಶಾರೀರಿಕ ಮತ್ತು ಮಾನಸಿಕ ವ್ಯಾಧಿಗಳಿಗೆ ಕಾರಣವಾಗುತ್ತವೆ.

     ಈ ರೀತಿಯ ದಿನಚರಿ ಇದ್ದಾಗಲೂ ಕಫಜನ್ಯ ವ್ಯಾಧಿಗಳು ತೊಂದರೆ ಕೊಟ್ಟರೆ ಅದಕ್ಕೆ ಒಂದೇ ಚಿಕಿತ್ಸೆ ವಮನ(ವಾಂತಿ ಮಾಡಿಸುವಿಕೆ) ಇದು ನುರಿತವರಿಂದಲೇ ನಡೆಯ ಬೇಕಾದ ಕ್ರಿಯೆ. ಇದನ್ನು ಜೀವನ ಶೈಲಿಯನ್ನು ಗಮನಿಸಿ ವಸಂತದ ಪ್ರಾರಂಭದಲ್ಲಿಯೇ ಮಾಡಬೇಕು.
ಹಬ್ಬಗಳಲ್ಲಿ ಪಥ್ಯ-- ಈ ಕಾಲದ ಹಬ್ಬಗಳೆಂದರೆ ಮೊದಲು ರಥಸಪ್ತಮಿ ಮಧ್ಯ ಶಿವ ರಾತ್ರಿ ನಂತರ ಯುಗಾದಿ
ಹಬ್ಬ ಮತ್ತು ಪಥ್ಯ- ರಥ ಸಪ್ತಮಿಗಾಗುವಾಗ ಸೂರ್ಯನ ಬಿಸಿಲು ಚಳಿಗಾಲದ ಮಂಜು ಕರಗುವಂತೆ ಕಫವನ್ನು ಕರಗಿಸುವ ಕಾರಣ ಕರಗುವ ಕಫದಿಂದ ತೊಂದರೆ ಆಗದಂತೆ ಎಕ್ಕದ ಎಲೆಯನ್ನು ಇಟ್ಟು ಸ್ನಾನವನ್ನು ಹೇಳಿದ್ದಾರೆ. ಬಹಳ ಕಫ ಇರುವವರಿಗೆ ಸೇವನಾ ವಿಧಾನವೂ ಇದೆ(ಸಂಪೂರ್ಣವಾಗಿ ವೈದ್ಯಕೀಯ ನಿರೀಕ್ಷಣೆಯಲ್ಲಿ) ನಂತರದ ಶಿವರಾತ್ರಿಯೂ ಕರಗುವ ಕಫದ ನಾಶಕ್ಕಾಗಿ ಉಪವಾಸ ಮತ್ತು ಜಾಗರಣೆ ಮಾಡುವ ಹಬ್ಬವೇ. ಇವನ್ನು ಸರಿಯಾಗಿ ಮಾಡಿದಲ್ಲಿ ವಸಂತದಲ್ಲಿ ಬರುವ ಉಬ್ಬಸ, ಚರ್ಮವ್ಯಾಧಿಗಳು ಬಾಧಿಸುವುದಿಲ್ಲ. ಹೀಗೆ ಮಾಡಿದ ನಂತರವೂ ಕಫದ ಶೇಷ ಇರುತ್ತದೆ ಅದನ್ನು ನಿವಾರಿಸಲು ಸಿಹಿ ಕಹಿಗಳ ಮಿಶ್ರಣವನ್ನು ಕೊಡಬೇಕು. ಇದಕ್ಕಾಗಿಯೇ ಯುಗಾದಿಯ ಬೇವು ಬೆಲ್ಲ. ಜಾಸ್ತಿ ತೊಂದರೆಗಳಿರುವವರಿಗೆ ಬೇವಿನ ಕಷಾಯದಿಂದಲೇ ವಾಂತಿ ಮಾಡಿಸಬೇಕು. ಇದಕ್ಕೆ ನುರಿತವರು ಅಗತ್ಯ. ಇದು ಗಿಡಗಳ ಚಿಗುರುವಿಕೆ, ಫಲಭರಿತವಾಗಲು ಕಾರಣವಾದ ವಸಂತವಾದರೆ ಇವು ಒಣಗಲು ಕಾರಣವಾದ ಗ್ರೀಷ್ಮ ಹೇಗೆ ನೋಡೋಣ

ಬಿಸಿ ಬಿಸಿಯಾದ ಬೇಸಗೆ - (4)

(ಏಪ್ರಿಲ್೨೧ ರಿಂದ ಜೂನ್ ೨೧) , ಸೌರಮಾನ ಮಾಸ - ವೃಷಭ, ಮಿಥುನ, ಚಾಂದ್ರಮಾನ ಮಾಸ -ವೈಶಾಖ, ಜ್ಯೇಷ್ಟ, ಆಷಾಢ, ಉಷ್ಣಾಂಶ - ಸುಮಾರು ೩೦-೩೫ ಡಿಗ್ರಿಗಿಂತ ಹೆಚ್ಚು
ಲಕ್ಷಣ-ಬೇಸಗೆ ಎನ್ನ ಬೇಕಾದರೆ ಬಿಸಿಲು ಮಾತ್ರವೇ ಅಲ್ಲದೆ ಉಷ್ಣಾಂಶ ಸುಮಾರು 35 c ಅಥವಾ ಅದಕ್ಕಿಂತ ಜಾಸ್ತಿ ಆಗಿರ ಬೇಕು, ಗಾಳಿ ಇಲ್ಲದಿರುವುದರಿಂದ ಗಿಡ ಮರಗಳು ಅಲ್ಲಾಡದಿರುವಿಕೆ, ಭೂಮಿ ಬಿಸಿಯಾಗುವಿಕೆ ಇರುವ ಪರಿಸ್ಥಿತಿಯನ್ನು ಗ್ರೀಷ್ಮ ಎನ್ನುತ್ತೇವೆ.
ದೇಹದ ಮೇಲೆ ಪ್ರಭಾವ -ಬಿಸಿಲಿನಲ್ಲಿ ಹೋದಾಗ ಮೈ ಉರಿ, ಬಾಯಾರಿಕೆ ಆಗುವಿಕೆ, ದೇಹ ಒಣಗುವಿಕೆ, ಉಷ್ಣಾಂಶ ಹೆಚ್ಚಿದಂತೆ ಈ ಕಾಲದಲ್ಲಿ ಬೇಗೆ ಹೆಚ್ಚಾಗುತ್ತದೆ. ವಸಂತದಲ್ಲಿ ಹೆಚ್ಚಾದ ಕಫ ಒಣಗುತ್ತದೆ. ಬೆವರು ಹೆಚ್ಚಿ ಬಾಯಾರಿಕೆ ಜಾಸ್ತಿಯಾಗಿ ನೀರು ಜಾಸ್ತಿ ಕುಡಿದರೆ ಜೀರ್ಣ ಶಕ್ತಿ ಕಡಿಮೆಯಾಗಿ ವ್ಯಾಧಿ ಬಂದರೆ, ಕುಡಿಯದಿದ್ದರೆ ನೀರಿನಂಶ ದೇಹದಲ್ಲಿ ಕಡಿಮೆಯಾಗಿ ಸುಸ್ತು, ಉರಿ ಮೂತ್ರ, ಮೂತ್ರ ಕೃಚ್ಛ್ರ ಇತ್ಯಾದಿ ತೊಂದರೆಗಳು ಬರಬಹುದು. ಕಫವು ಕಡಿಮೆಯಾದಂತೆ ವಾತಾವರಣದ ರೂಕ್ಷತೆಯಿಂದ ವಾತವೂ, ಉಷ್ಣತೆಯಿಂದ ಪಿತ್ತವೂ ಜಾಸ್ತಿಯಾಗಿ ಜಾಗ್ರತೆ ಮಾಡದಿದ್ದರೆ ದೊಡ್ಡ ರೋಗಗಳ ಮುನ್ಸೂಚನೆ ತೋರಿಸುತ್ತವೆ.
add chart here
ಪಥ್ಯ ಮತ್ತು ಅಪಥ್ಯ - ಆಹಾರ -ಈ ಕಾಲದಲ್ಲಿ ಸಿಹಿ ಪ್ರಧಾನವಾದ ದ್ರವ ಪದಾರ್ಥಗಳನ್ನು ಸೇವಿಸ ಬೇಕು. ಹುಳಿ ಉಪ್ಪುಗಳು ಕಡಿಮೆಯೂ , ಖಾರ ಕಹಿಗಳು ಅತೀ
ಕಡಿಮೆಯೂ ಇರ ಬೇಕು. ಹಾಲು, ಹಾಲಿನಿಂದ ತಯಾರಾದ ಸಿಹಿಗಳು, ಬಾಸುಂದಿ, ಕುಂದ ಮುಂತಾದ ತಿಂಡಿಗಳು ಅದೇ ರೀತಿ ಶ್ರೀ ಖಂಡ ಇತ್ಯಾದಿಗಳಿಂದ ಆರೋಗ್ಯ ವೃದ್ಧಿಯಾಗುತ್ತದೆ. (ಬೆವರುತ್ತಾ ಇದ್ದರೆ )ಕರಾವಳಿಯ ಬೆವರುಇಲ್ಲವಾದರೆ ರಾಜಾಸ್ಥಾನಿ, ಉತ್ತರ ಕರ್ನಾಟಕದ ಆಹಾರ ಹಿತಕರ.) ಸೊಪ್ಪುಗಳಲ್ಲಿ ಹುಳಿ ಸೊಪ್ಪು, ಚಕ್ರ ಮುನಿ ಇವುಗಳ ತಂಬುಳಿ ಹಿತಕರ. (ಸೊಪ್ಪುಗಳು, ತೆಂಗಿನ ಕಾಯಿ, ಉಪ್ಪು ಹಾಕಿ ರುಬ್ಬಿ ಬೆಣ್ಣೆ ತೆಗೆದ ಮಜ್ಜಿಗೆ ಹಾಕಿ ಒಗ್ಗರಣೆ ಹಾಕುವುದು. ಬೆಳ್ಳುಳ್ಳಿ ಹಾಕ ಬಾರದು.)ನೀರಿನ ಬದಲು ಹಸಿಮೆಣಸು ಹಾಕದ ಸ್ವಲ್ಪ ಉಪ್ಪು, ಶುಂಠಿ, ಕೊತ್ತಂಬರಿ ಸೊಪ್ಪು ಸೇರಿಸಿದ ಬೆಣ್ಣೆ ತೆಗೆದ (ಕೆನೆ ತೆಗೆದ ಅಲ್ಲ)ಜಾಸ್ತಿ ನೀರು ಸೇರಿಸಿದ ಮಜ್ಜಿಗೆ (ಮಡಕೆಯಲ್ಲಿಟ್ಟು ಅಥವಾ 20 c ಗೆ ತಂಪು ಮಾಡಿದ)ಬಹಳ ಹಿತಕರ.
ವಿಹಾರ- ಕಾಲ ಪ್ರಭಾವದಿಂದಲೇ ಬೆವರುವ ಕಾರಣ ಸಾಮಾನ್ಯರಿಗೆ ವ್ಯಾಯಾಮ ವರ್ಜ್ಯ; ಮಾಡಿದಲ್ಲಿ ವಾತ ಪ್ರಕೋಪವಾಗಿ ಮಳೆಗಾಲದಲ್ಲಿ ಖಾಯಿಲೆಗಳು ಜಾಸ್ತಿಯಾಗುತ್ತವೆ. (ಬಲ ವೃದ್ದಿಗಾಗಿ ಮಾಡುವುದು ವರ್ಜ್ಯ, ವ್ಯಾಧಿ ನಿವೃತ್ತಿಯ ವ್ಯಾಯಾಮ ಮಾಡಬೇಕು) ಹಣ್ಣಿನ
ರಸಕ್ಕೆ ಶುಂಠಿ ಹಾಗೂ ಮೆಣಸನ್ನು ಬಹಳ ಅಲ್ಪವಾಗಿ ಸೇರಿಸಿ, ಜೇನು, ಸಕ್ಕರೆ ಸೇರಿಸಿ ಕುಡಿಯ ಬಹುದು.(ಹಾಲು ಸೇರಿಸಿದ ಮಿಲ್ಕ ಶೇಕ್ ಕುಡಿಯಬಾರದು)
ಅಪಥ್ಯ- ಹುಳಿ ರಸವೇ ಪ್ರಧಾನವಾದ ದ್ರವಗಳನ್ನು ಕುಡಿಯಬಾರದು. ಇವುಗಳು ಮನಸ್ಸಿಗೆ ಹಿತ ಎನಿಸಿದರೂ ದೇಹದ ಆಮ್ಲತೆ ಜಾಸ್ತಿಯಾಗಿ ಅವು ಇಲ್ಲದಾಗ ಮನೋ ಬಲ ಕುಂದುತ್ತದೆ. ಅಲ್ಲದೆ ಚರ್ಮ ಒರಟು ಮತ್ತು ಕಪ್ಪಾಗುತ್ತದೆ. ಅದೇರೀತಿ ಉತ್ತರ ಭಾರತ ತಿಂಡಿಗಳು ಆರೋಗ್ಯವನ್ನು ಹಾಳುಮಾಬಹುದು. ಬೇಸಗೆಯಲ್ಲಿ ನಿತ್ಯ ಮಾಂಸಾಹಾರಿಗಳಲ್ಲದವರು ಯಾವುದೇ ಆಹಾರಕ್ಕೆ ಬೆಳ್ಳುಳ್ಳಿ, ಕರಿಮೆಣಸು ಮತ್ತು ಹಸಿ ಮೆಣಸಿನ ಕಾಯಿ ಬಳಸಬಾರದು, ನೀರುಳ್ಳಿಯಿಂದ ತೊಂದರೆ ಆಗುವುದಿಲ್ಲ.
ಪಥ್ಯ ಆಹಾರಗಳು- ಹೆಸರ ಬೇಳೆ, ನೀರು ಹೆಚ್ಚಾಗಿರುವ ಸೌತೆ, ಕಲ್ಲಂಗಡಿ, ಸಿಹಿ ಕುಂಬಳ, ಸೀಮೆ ಬದನೆ , ದಾಳಿಂಬೆ, ಮುಸಂಬೆ, ಕಿತ್ತಳೆ, ರಾಮ ನವಮಿ ನಂತರ ಕರಬೂಜ ಉತ್ತಮ. ಬೇಯಿಸಿದ ಬಾಳೆಹಣ್ಣಿನ ತಿಂಡಿಗಳು ಬಿಸಿಲಲ್ಲಿ ತಿರುಗಾಡುವವರಿಗೆ ಒಳ್ಳೆಯದು. ಇಲ್ಲವಾದರೆ ಜೀರ್ಣ ಶಕ್ತಿ ಕಡಿಮೆಯಾಗಿ ತೊಂದರೆ ಆಗುವ ಸಾಧ್ಯತೆ ಇದೆ. ಹುಳಿ ಬಳಕೆಯಾಗುವ ಪಾನಕ ಅಡಿಗೆಗೆ ಕೋಕಮ್, ಉಂಡೆಹುಳಿ, ಅಮಟೆಕಾಯಿ ಬಳಕೆ ಒಳ್ಳೆಯದು.
ನಿದ್ರೆ- ಈ ಕಾಲದಲ್ಲಿ ಹಗಲು ಹೆಚ್ಚು ರಾತ್ರಿ ಕಡಮೆ ಹಾಗಾಗಿ ಸೂರ್ಯನನ್ನನುಸರಿಸಿ ಏಳುವವರಿಗೆ, ಬಿಸಿಲಲ್ಲಿ ತಿರುಗಾಡುವವರಿಗೆ ಹಗಲು ನಿದ್ರೆ ಹಿತಕರ. ಬಟ್ಟೆ- ಗಾಡವಾದ ದಪ್ಪನೆಯ ಬಟ್ಟೆಗಳನ್ನು ಧರಿಸದೆ ತೆಳುವಾದ ಬೆವರು ಹೀರುವ ಬಟ್ಟೆಗಳನ್ನು ಧರಿಸಬೇಕು ಮೈ ತೋರಿಸುವ ಬಟ್ಟೆ ದರಿಸಿದರೆ ಸೂರ್ಯನ ಝಳಕ್ಕೆ ಮೈ ಕಪ್ಪಾಗುತ್ತದೆ ಮತ್ತು ಚರ್ಮದಲ್ಲಿ ಕಜ್ಜಿಗಳಾಗುವ ಸಾಧ್ಯತೆ ಇದೆ
ಹಬ್ಬ - ಈ ಕಾಲದಲ್ಲಿ ರಾಮನವಮಿ ಬರುತ್ತದೆ. ವಸಂತ ಋತುವಿನ ಹಬ್ಬವಾದರೂ ಋತುಸಂಧಿಯ ಹಬ್ಬವಾಗಿದೆ. ಇದು ಗ್ರೀಷ್ಮ ಋತುವಿನ ಆಹಾರವಾದ ಪಾನಕ, ಮಜ್ಜಿಗೆ ಕೋಸಂಬರಿಗಳನ್ನು ಪ್ರಧಾನವಾಗಿಸುವ ಹಬ್ಬ. ಮುಂದೆ