Ayurvediccommunity.com©
 

ಕಾಲ ದೇಶ ಆಯುರ್ವೇದ ಮತ್ತು ಹಬ್ಬ

ಇದೇನಿದು ? ಕಾಲ, ದೇಶ ಆಯುರ್ವೇದ ಹಬ್ಬ - ಒಳ್ಳೆ ಐನ್ ಸ್ಟೀನ್ ನ ಟೈಮ್ and ಸ್ಪೇಸ್ ಥಿಯರಿ ಹಾಗಿದೆಯಲ್ಲ? ಅಲ್ಲ ಆಯುರ್ವೇದದ ಟೈಮ್ and ಪ್ಲೇಸ್ ಥಿಯರಿ ಮತ್ತು ಹಬ್ಬ     

ಈಗಿನ ಜಗತ್ತಿನ ಬದಲಾವಣೆಯಿಂದಾಗಿ ಶರೀರದಲ್ಲಿ ಆಗುವ ಪರಿಣಾಮ ಹಾಗು ದುಷ್ಪರಿಣಾಮಗಳನ್ನು ವಿಜ್ಞಾನಿಗಳು ಹೇಳುವಲ್ಲಿ ವರೆಗೆ ಕಾಯದೆ ನಾವೇ ಸರಿಪಡಿಸಿ ಕೊಳ್ಳುವ ವಿಷಯವೇ ಆಯುರ್ವೇದದ (ಕಾಲ, ದೇಶ ಸಂಬಂಧ) time and place theory. ಇದರ applied form (applied physics, applied botany ಇದ್ದ ಹಾಗೆ) applied life science ರೂಪವೇ ಹಬ್ಬಗಳು. ಹೇಗೆ ತಿಳಿಯ ಬೇಕೆ? ಮುಂದೆ ಓದಿ.

  ಸ್ವಾಭಾವಿಕವಾಗಿ ಭೂಮಿಯಲ್ಲಿ ಮತ್ತು ವಾತಾವರಣದಲ್ಲಿ ಆಗುವ ಬದಲಾವಣೆಗಳು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ, ಆದ್ದರಿಂದ ಮನುಷ್ಯನು ಭೂಮಿ ಮತ್ತು ವಾತಾವರಣದಲ್ಲಿ ಮಾಡುವ ಬದಲಾವಣೆಗಳಿಂದಾಗಿ ಗುಣ ಪಡಿಸಲಾಗುವ ಮತ್ತು ಗುಣಪಡಿಸಲಾಗದ ವ್ಯಾಧಿಗಳು ಉತ್ಪತ್ತಿಯಾಗುತ್ತವೆ. ಈ ವ್ಯಾಧಿಗಳು ಬಾರದಂತೆ ತಡೆಗಟ್ಟುವ ಉಪಾಯವೆಂದರೆ ಆಯುರ್ವೇದದ ಮೂಲಕ ಕಾಲ ದೇಶಗಳನ್ನು (ಅಗತ್ಯ ಇರುವಷ್ಟು) ಅರ್ಥ ಮಾಡಿ ಕೊಂಡು
೧) ಆಯಾ ಪ್ರದೇಶದ ಆಹಾರ ವಿಧಾನವನ್ನು ಕಾಲಕ್ಕನುಗುಣವಾಗಿ ಸಂಸ್ಕಾರಮಾಡಿ (ತಯಾರಿಸುವ ವಿಧಾನದಲ್ಲಿ ಬದಲಾವಣೆ ಮಾಡಿ) ಉಪಯೋಗಿಸುವುದು.
೨) ದಿನಚರಿಯನ್ನು ದೇಶ ಕಾಲಕ್ಕನುಗುಣವಾಗಿ ಬದಲಾಯಿಸುವುದು.

ಎಷ್ಟೇ ಬುದ್ಧಿವಂತನಾದರೂ ಕಾಲದ ಪರಿಣಾಮವನ್ನು ದೇಶ ಮತ್ತು ದೇಹದ ಮೇಲೆ ತಿಳಿದು ಅದಕ್ಕನುಸಾರ ಆಹಾರ, ಆಚಾರಗಳಲ್ಲಿ ಬದಲಾವಣೆ ಮಾಡಲು ಕಷ್ಟವೆಂದು ತಿಳಿದು ಹಿಂದಿನವರು ಹಬ್ಬ, ವ್ರತಗಳನ್ನುಆಚರಣೆಗೆ ತಂದರು.

ಯಾವ ಋತುವಿನಲ್ಲಿ ಯಾರಿಗೆ?, ಯಾವ ಆಹಾರವನ್ನು? ಯಾರು?, ಹೇಗೆ? ಈ ವಿಷಯಗಳಿಗೆ ಉತ್ತರ ಸಾಮಾನ್ಯವಾಗಿ ಆಯಾ ಜಾಗದ ಸರಿಯಾದ ಸಂಪ್ರದಾಯದಲ್ಲಿ ಅಡಗಿದೆ. ಅದಕ್ಕೆ ವ್ರತ, ಹಬ್ಬ ಇತ್ಯಾದಿ ಹೆಸರುಗಳಿಂದ ಆಚರಣೆಯಲ್ಲಿ ಇಟ್ಟಿದ್ದಾರೆ ಪ್ರತಿ ವ್ರತಗಳಲ್ಲಿ, ಹಬ್ಬಗಳಲ್ಲಿ ಇದೇ ಆಹಾರ, ಇದೇ ರೀತಿಯಾಗಿ ತಯಾರಿಸಿದ್ದೇ ಆಹಾರ ಎನ್ನುವ ನಿಯಮಗಳಿವೆ. ಇದನ್ನು ತಿಳಿದು ಆಚರಿಸಿದಾಗ ಯಾವುದೂ ಮೂಢ ನಂಬಿಕೆ ಎನಿಸದೆ ಅದರ ವೈಜ್ಞಾನಿಕತೆ ಅರ್ಥವಾಗುತ್ತದೆ.

    ಸಾಮಾನ್ಯವಾಗಿ ಎರಡು ತಿಂಗಳ ಅವಧಿಯಲ್ಲಿ ಆಚಾರ ವಿಚಾರಗಳಲ್ಲಿ ಬದಲಾವಣೆಯನ್ನು ಆಯುರ್ವೇದದ ಋತು ಚರ್ಯೆಗನುಸಾರವಾಗಿ ಹೇಳಿದ್ದು ಇದನ್ನು ಸರಿಯಾದ ರೀತಿಯಲ್ಲಿ ಆಚರಿಸಿದರೆ "ರೋಗ ಬಂದ ಮೇಲೆ ಚಿಕಿತ್ಸೆಗಿಂತ ಬಾರದಂತೆ ತಡೆಗಟ್ಟುವುದು ಒಳ್ಳೆಯದು" ಎಂಬ ನುಡಿ ಸತ್ಯವಾಗುತ್ತದೆ. . ಇದನ್ನು ಅನುಸರಿಸಿದರೆ ಆರೋಗ್ಯವನ್ನು, ಉತ್ತಮ ಜೀವನವನ್ನು ಸುಲಭವಾಗಿ ಪಡೆಯ ಬಹುದು; ಇದು ಶಾರೀರಿಕ ಸ್ವಾಸ್ಥ್ಯಕ್ಕೂ, ಮಾನಸಿಕ ಶಕ್ತಿ ವರ್ಧನೆಗೂ ಕಾರಣವಾಗುತ್ತದೆ . ಇದರೊಂದಿಗೆ ಇಂದು ಸಂಪ್ರದಾಯವನ್ನು ಸಂಪೂರ್ಣ ತ್ಯಜಿಸಿ, ಆಹಾರವನ್ನು ಕ್ಯಾಲರಿಗಳ ಲೆಕ್ಕ ಹಾಕಿಸೇವಿಸುತ್ತಿದ್ದೇವೆ.

ಇಡೀ ವರ್ಷ ಅದೇ ಇಡ್ಲಿ ದೋಸೆ, ಮಾಂಸಗಳಲ್ಲಿ ಮುಳುಗಿ, ಎಲ್ಲೇ ಇರು ಹೇಗೇ ಇರು ದೋಸೆ, ಪುಳಿಯೋಗರೆ, ಗಂಜಿಗಳಲ್ಲೇ ನಮ್ಮ ಆಜನ್ಮ ಸಿದ್ಧ ಹಕ್ಕುಗಳನ್ನು ಕಂಡು ಕೊಳ್ಳುತ್ತಿದ್ದೇವೆ. ಇದರಿಂದ ಬರುವುದು-ಆಜನ್ಮವಾದ ಡಯಾಬಿಟೀಸ್, ಬಿಪಿ, ಮನೋವ್ಯಾಧಿಗಳೇ ಹೊರತು ಆರೋಗ್ಯವಲ್ಲ. ಇದರಿಂದಲೇ ಬುದ್ಧ ಹೇಳಿದ ಸಾವಿಲ್ಲದ ಮನೆಯ ಸಾಸಿವೆಗಿಂತಲೂ (ಸಕ್ಕರೆ ಖಾಯಿಲೆ ಇಲ್ಲದ) ಶುಗರಿಲ್ಲದ ಮನೆಯ ಸಾಸಿವೆ ಕಷ್ಟವಾಗುತ್ತಿದೆ. ಸಾಮಾನ್ಯವಾಗಿ ಈಗಿನ ಗುಣವಾಗದ ಖಾಯಿಲೆಗಳಿಗೆಲ್ಲಾ ಬದಲಾಯಿಸಲ್ಪಡದೇ ಇರುವ ಜೀವನ ಶೈಲಿಯೇ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಇದರಿಂದ ಬರುವ ಖಾಯಿಲೆಗಳ ಪಟ್ಟಿ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆ ಆಗುತ್ತಿಲ್ಲ.

ಜೀವನ ಶೈಲಿಯು ಆಯಾ ಪ್ರದೇಶಕ್ಕನುಸಾರ ಬದಲಾಗುವ ಕಾರಣ ಆಯುರ್ವೇದ ಹೊರತು ಇನ್ನಾವುದೇ ವಿಜ್ಞಾನಕ್ಕೆ ಇದನ್ನು ಅರ್ಥೈಸಿ ಅಳವಡಿಸಿಕೊಳ್ಳುವ ಸಾಮರ್ಥ್ಯವಿಲ್ಲ. ಹಾಗಾಗಿ ಮೊದಲು ಕಾಲ ವಿವರಣೆ ನಂತರ ದೇಶ ವಿವರಣೆ. ಮುಂದೆ