ಕನ್ನಡದಲ್ಲಿ ನಾವು ಮೊದಲಾಗಿ ಸಹಸ್ರಾರ್ಧ ವೃಕ್ಷಗಳು ಕೊಟ್ಟಿದ್ದೇವೆ.- ಇದು 1926ರರಲ್ಲಿ ಬಾಸೆಲ್ ಮಿಶನ್ ಮಂಗಳೂರು ಇವರಿಂದ ಬಿಡುಗಡೆ ಮಾಡಲ್ಪಟ್ಟ ಪುಸ್ತಕ. ಆಗಿನಕಾಲದಲ್ಲಿ ಉಪಯೋಗದಲ್ಲಿದ್ದ ಗಿಡಗಳ ಮಾಹಿತಿಯನ್ನು ಸಂಪಾದಿಸಿದ್ದು, ಒಂದು ಅಪರೂಪದ ಸಂಗ್ರಹ. ಇದನ್ನು ಚಿತ್ರಸಹಿತ ಕೊಡಲು ಪ್ರಯತ್ನಿಸುತ್ತಿದ್ದೇವೆ. ಇದರಲ್ಲಿ ಹೆಸರೇ ಸೂಚಿಸುವಂತೆ 500ಕ್ಕೂ ಹೆಚ್ಚು ಸಸ್ಯಗಳ ಬಗೆಗೆ ಮಾಹಿತಿ ಇದ್ದು ನಾವು ಭಾವಪ್ರಕಾಶದಲ್ಲಿ ಇಲ್ಲದ ಮಾಹಿತಿಯನ್ನು ಮಾತ್ರ ಕೊಟ್ಟಿದ್ದೇವೆ. ಕನ್ನಡದ ಅಕಾರಾದಿಯಲ್ಲಿ ನೋಡಲು ಇಲ್ಲಿclickಮಾಡಿ . Botanical name ಅನುಕ್ರಮಣಿಕೆಯಲ್ಲಿ ನೋಡಲು ಇಲ್ಲಿ clickಮಾಡಿ
ಕನ್ನಡದಲ್ಲಿ ನಾವು ಎರಡನೆಯದಾಗಿ ಅಮರಕೋಶವನ್ನು ಕೊಡುತ್ತಿದ್ದೇವೆ.
ಸಂಸ್ಕೃತ ಶಬ್ದಗಳು ಕನ್ನಡ ಶಬ್ದಗಳು ಇಂಗ್ಲಿಷ್ ಶಬ್ದಗಳು ಚಿತ್ರಗಳು
ಅಮರಕೋಶ - ಇದೊಂದು ಪರ್ಯಾಯ ಪದಕೋಶ. ಒಂದು ಶಬ್ದಕ್ಕೆ ಸಮಾನಾರ್ಥ ಬರುವ ಶಬ್ದಗಳನ್ನು ಸೃತಿಯಲ್ಲಿ ಉಳಿಯುವ ರೀತಿ ಶ್ಲೋಕ ರಚನೆ ಮಾಡಲಾಗಿದ್ದು ಒಂದು ಅಪೂರ್ವ ಕೃತಿ. ಇದಕ್ಕೆ ಕನ್ನಡದಲ್ಲಿ ಗುರುಬಾಲ ಪ್ರಭೋದಿಕೆ ವ್ಯಾಖ್ಯಾನವಲ್ಲದೆ, ಶ್ರೀರಂಗನಾಥ ಶರ್ಮ, Lewis rice, ವಿಷ್ಣುಶರ್ಮ ಮುಂತಾದವರಿಂದ ವ್ಯಾಖ್ಯಾನಿಸಲ್ಪಟ್ಟಿದೆ. ನಾವು ಇದರ ಸಸ್ಯಗಳ ಬಗೆಗೆ ಚಿತ್ರ ಸಹಿತ ವಿವರಣೆ ನೀಡಲು ಬಯಸಿದ್ದೇವೆ. ಇದರಲ್ಲಿ ವಿವರ ಕಾಂಡ, ವರ್ಗ, ಶಬ್ದ, ಪರ್ಯಾಯ, ಧಾತು- ಶಬ್ದದ ಕನ್ನಡ ಅರ್ಥ, ವಿವರಣೆ, ಅಂತ, ಲಿಂಗ, English meaning, Details ಹಾಗು ಚಿತ್ರಗಳಿವೆ.ಸಂಸ್ಕೃತ ಶಬ್ದ ಅಥವಾ ಕನ್ನಡ ಶಬ್ದ, English ಪದ ಆರಿಸಿ -ತೋರಿಸಿ button ಒತ್ತಿದಲ್ಲಿ ವಿವರ ಬರುತ್ತದೆ. ವಿವರ ಕಾಂಡ, ವರ್ಗ, ಶಬ್ದ, ಪರ್ಯಾಯ, ಅಂತ, ಲಿಂಗ, ಕನ್ನಡ ಅರ್ಥ, ವಿವರಣೆ, English ವಿವರ ಹಾಗು ಚಿತ್ರ. ಈ ರೀತಿಯಾದ ಪ್ರಯತ್ನ ಪ್ರಥಮವಾಗಿದ್ದು ವಿದ್ವಾಂಸರು ಸ್ವೀಕರಿಸುವರೆಂದು ನಂಬಿದ್ದೇವೆ.
ಇದನ್ನು ಕನ್ನಡ, ಸಂಸ್ಕೃತ ಹಾಗು ಇತರ ಭಾರತ ಭಾಷೆಗಳಲ್ಲಿ ಕೊಡುವ ಆಲೋಚನೆ ಇದ್ದು ಅದು ಮುಂದಕ್ಕೆ.
ಅಮರಕೋಶದಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಹುಡುಕಿ. ಅದಕ್ಕಾಗಿ ಸಂಬಂಧಪಟ್ಟ ಶಬ್ದವನ್ನು ಆರಿಸಿ.
ಅಮರಕೋಶ ಕಾಂಡ, ವರ್ಗ, ಶಬ್ದ, ಪರ್ಯಾಯ, ಈ ರೀತಿಯಾಗಿ ವಿಭಾಗವಾಗಿದ್ದು ನಿಮಗೆ ಬೇಕಾದುದನ್ನು ಆರಿಸಿ. ಅದೇರೀತಿ ಕನ್ನಡ ಶಬ್ದ, ಇಂಗ್ಲಿಷ್ ಶಬ್ದಗಳ ಪರಿವಿಡಿ ಕೊಟ್ಟಿದ್ದೇವೆ. ಚಿತ್ರಗಳ ಪರಿವಿಡಿಯೂ ಇದೆ.
|